ಅಂತೆಕಂತೆಗಳ ನಡುವೆ ಕೂತಿರುವ ಫ್ಯಾಸಿಸ್ಟ್ ಭೂತ.


ರಾಮರಾಜ್ಯ ಅಂದ್ರೆ ಸುಮ್ಮನೆ ಆಗೋದಿಲ್ಲ – ಗುಳ್ಳೆ ನರಿ ಕರಡಿಗುಡ್ಡದ ಮೇಲೆ ಕೂಗುತ್ತಿತ್ತು. ಆ ವದರುವಿಕೆಯನ್ನ ಮಾಳಜ್ಜಿ ಪ್ರಳಯಕ್ಕ ಹೋಲಿಸಿ ಕತೆಮಾಡಿ ವಿವರಿಸುತ್ತಿದ್ದಳು. ಹಿಂದಿನ ದಿನ ಶಿವಮೊಗ್ಗ ಸೀಮೆಯ ಯಾವದೋ ಹಳ್ಳಿಯಲ್ಲಿ ಹಸುವಿನ ಹೊಟ್ಟೆಯಲ್ಲಿ ಒಂದು ಹೆಣ್ಣುಕೂಸು ಹುಟ್ಟಿ, ಹುಟ್ಟೂತಲೇ ಪ್ರಳಯದ ಮಾತಾಡಿ ಸತ್ತು ಹೋದ ವದಂತಿಯೇ ಆಕೆಯ ಮಾತುಗಳಿಗೆ ಸಾಕ್ಷಿ. ‘ಬೆಳಗಿನ ಬೆಳ್ಳಿ ಚುಕ್ಕಿ ಮೂಡುವುದರೊಳಗೆ ಎದ್ದವರೆಲ್ಲ ತನ್ನವರು, ಉಳಿದವರೆಲ್ಲ ಮುಳುಗುವ ಮಾಯವಿಗಳು’ ಎಂದು ಆ ಕೂಸು ತೊದಲಿತ್ತಂತೆ.

ಇನ್ನೊಂದು ಕಡೆ ರಮಜಾನ್ ಹಬ್ಬದ ದಿನ ಹಾಲಿನಲ್ಲಿ ವಿಷ ಬೆರೆತ ಸುದ್ದಿ, ಈ ಕತೆಗೆ ರೆಕ್ಕೆಪುಕ್ಕ ಬಲಿತು ತಾಸೊಪ್ಪತ್ತಿನೊಳಗೆ ರಮಜಾನ್ ಆಚರಿಸುವಲ್ಲಿ ಸೇರಿದ್ದ ಸಮೂಹದೊಳಗೆ ಸಣ್ಣಕೆ ಹೊಗೆಯಾಡಿ ಅವರ ಮೇಲೆ, ಇವರ ಮೇಲೆ ಎಂಬ ಸಂಶಯದ ಕಿಡಿ ಹೊತ್ತಿ ಧುತ್ತೆಂದು ಗಲಭೆ ಆಗಬಹುದೆಂದು ಭಟ್ಟರ ಪಡೆಯವರು ಖಡ್ಗ ತ್ರಿಶೂಲದ ತುದಿ ಮಸೆದುಕೊಂಡು ಕೂತಿದ್ದರೇನೋ… ಕೋಮು ವಿಧ್ವೇಷದ ಕಿಚ್ಚು ಧಗಧಗಿಸುತ್ತದೆ ಎಂದು ನಂಬಿದ್ದರು. (ಯಾಕಂದ್ರೆ ಹಿಂದೊಮ್ಮೆ ಇಂಥದೇ ಸುದ್ದಿಯೊಂದನ್ನು ಕುಂದಾಪುರ ಸೀಮೆಯಲ್ಲಿ ಏಡ್ಸ್ ಸೂಜಿ ವದಂತಿ ಹರಿಬಿಟ್ಟು ಗಲಭೆಗೆ ಕುಮ್ಮಕ್ಕು ನೀಡಿದ್ದರು) ಅಲ್ಲಿ ಹಿಡಿದ ಲಾಠಿಗಳು ರೈಲ್ವೆ ನಿಲ್ದಾಣಕ್ಕೆ ಬಂದವು. ಆಸ್ಸಾಮ್ ಜನ ಹೋದರು ತಿರುಗಿ ಬರತೊಡಗಿದರು. ಇಲ್ಲಿಂದ ಕರ್ನಾಟಕದಲ್ಲಿ ಸಣ್ಣಪುಟ್ಟ ಆರೋಪಗಳು ಮುಸ್ಲಿಮರ ಮೇಲೆ ಆರಂಭವಾದವು. ಪೋಲಿಸರ ಎದುರಿನಲ್ಲಿಯೇ ಗುಂಪು ಗುಂಪಾಗಿ ನುಗ್ಗಿ ಕಣ್ಣಿಗೆ ಕಂಡ ಮುಸಲ್ಮಾನರನ್ನೆಲ್ಲ ಬಾಂಗ್ಲಾ ನುಸುಳಕೋರರೆಂದು ಹಿಂಸಿಸಿ ಹಿಡಿದುಕೊಡತೊಡಗಿದರು. ಅದು ಕರಸೇವೆಯ ಮತ್ತೊಂದು ಭಾಗದಂತೆ ಆರಂಭವಾದರೂ ಆ ಕೃತ್ಯಕ್ಕೆ ಸರಿಯಾದ ಸಾಕ್ಷ್ಯಗಳು ಸಿಕ್ಕಲಿಲ್ಲ.

ಕೆ ವಿ ಪ್ರಭಾಕರ ಅವರು ಕನ್ನಡಪ್ರಭದ ತಮ್ಮ ಜಾತಿಜ್ಯೋತಿ ಅಂಕಣದಲ್ಲಿ ಪಿಂಜಾರರು ಹಿಂದೂಗಳು ಎಂದು ಪ್ರತಿಪಾದಿಸುವ ಮಾದರಿಯ ಲೇಖನವೊಂದನ್ನು ಬರೆದು ಆ ಸಣ್ಣ ಸಮುದಾಯವನ್ನ ಮಾನಸಿಕವಾಗಿ ಇವರು ಹಿಂದೂಗಳು ಎಂದು ಹೇಳುವ ಮೂಲಕ ಅವರ ಆತ್ಮವಿಶ್ವಾಸವನ್ನು ಅಲುಗಾಡಿಸಿ ಮತಾಂತರಕ್ಕೆ ಬೇಕಾದ ವೇದಿಕೆಯನ್ನು ಸಿದ್ಧಗೊಳಿಸಿದರು ಎಂಬುದು ಆ ಲೇಖನದ ಹಿಂದಿನ ಆಶಯವಾಗಿದೆ ಅನ್ನೋದು ಖಾತ್ರಿಯಾಗುತ್ತದೆ. ಈ ರೀತಿಯಾಗಿ ತಮ್ಮ ಅಭಿವ್ಯಕ್ತಿಗೆ ಅವಕಾಶ ಸಿಕ್ಕಲ್ಲೆಲ್ಲ ಫ್ಯಾಸಿಸ್ಟ ದೇಶಭಕ್ತರು ವಾಂತಿ ಮಾಡಿಕೊಳ್ಳುತ್ತಿರುವುದು ಕೂಡ ಮುಸ್ಲಿಂ ವಿರೋಧಿ ಹಿನ್ನೆಲೆಯದೇ ಅಲ್ಲವೇ..?

ಇಂಥದೇ ಕಥನದ ಸಾಲಿನ ಗುಣರೂಪವುಳ್ಳ ಮತ್ತೊಂದು ಕತೆ ಚಡ್ಡಿ ಚಿತ್ರನ್ನ ಆಗಿ ಪೋಲಿಸು ಕಟ್ಟೆ ಏರಿದ್ದಲ್ಲದೆ, ಅಮಾಯಕರನ್ನು ಶಂಕಿತ ಉಗ್ರರೆಂದೂ ಕನ್ನಡದ ಪ್ರಖಾಂಡ ಪಂಡಿತರು-ಮೋದಿಯ ಹೊಗಳುಭಟರುಗಳ ಕೊಲೆಸಂಚು ಭಯೋತ್ಪಾದನ ಕೃತ್ಯವೆಂದೂ, ಶಂಕಿತರು ಇಂತಿಂಥ ಸಂಘಟನೆಯವರೆಂದೂ, ಸ್ಥಳಿಯ ಮುಸ್ಲಿಂ ಯುವಕರನ್ನು ಸೆರೆಯಾಳಾಗಿಸುವ ಕುತಂತ್ರದ ಸುತ್ತ ಹೆಣೆದ ಭಾರಿ ಭಯಂಕರ ಭಯೋತ್ಪಾದನಾ ಕೃತ್ಯವೊಂದನ್ನು ಬಯಲಿಗೆಳೆದ ಖುಷಿಯಲ್ಲಿ ಫುಲ್ ಚಡ್ಡಿಗಳು ಮತ್ತು ಅರಕಳಿ ಚಡ್ಡಿಗಳು ಕೈ-ಕೈ ಮಿಲಾಯಿಸಿ ಅಲ್ಪಸಂಖ್ಯಾತರನ್ನೊಂದು ಕೈ ನೋಡಕೊಂಡಿದ್ದು ರಾಜ್ಯ ಸರಕಾರದ ಮಹತ್ಸಾಧನೆಯೇ ಅನ್ನಬೇಕು. ಅಮಾಯಕರನ್ನು ಬಂಧಿಸಿ ಇಲ್ಲಸಲ್ಲದ ಆರೋಪಗಳ ಪಟ್ಟಿಯನ್ನು ಪೋಲಿಸರಕಿಂತ ಮೊದಲೇ ಪತ್ರಿಕೆಯಲ್ಲಿ ಅಚ್ಚು ಹಾಕಿಸುವ ಧಾವಂತ ಪತ್ರಿಕೆಯವರದಾಗಿತ್ತು. ಹಿಟ್ಟು-ಲಿಸ್ಟಿನಲ್ಲಿದ್ದ ಕ್ರಿಯಾಶೀಲ (ಕ್ರಿಯಾಶಿಲ ಅಂದ್ರೆ ಚರಿತ್ರೆಯನ್ನು ತಿರುಚುವುದು) ಅಂಕಣಕಾರರ, ಸಂಪಾದಕರ, ಅಭಿಮಾನಿಗಳಂತೂ ಬದುಕಿ ಬಂದ ತಮ್ಮ ಪಾಲಿನ ದೇಶಭಕ್ತ ಶಾಂತಿಧೂತರನ್ನ ಹೂ-ಹಣ್ಣುಗಳಿಂದ, ಹಾರ-ತುರಾಯಿಗಳಿಂದ ಅಭಿನಂದಿಸಿದ್ದೂ ಸುದ್ದಿಯ ಭಾಗವಾಗಿಯೇ ಸುದ್ದಿಮನೆ ಸೇರಿಕೊಂಡಿತ್ತು.

ಗಾಂಧೀ ಒಂದುಕಡೆ ‘ದೇಶದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಅನ್ನುವುದರ ಮೇಲೆ ಪ್ರಜಾಪ್ರಭುತ್ವದ ಗುಣಮಟ್ಟ ನಿರ್ಧಾರವಾಗುತ್ತದೆ’ ಎಂದು ಹೇಳಿರುವುದರ ಹಿಂದಿನ ಮರ್ಮ ಈ ಕಪಿ ಸೈನ್ಯಕ್ಕೆ ಅರ್ಥವಾಗಲಾರದು. ಇಂಥ ವಸ್ತುಸ್ಥಿತಿಯಲ್ಲಿ ಚುನಾವಣೆಯ ತಯಾರಿ ಹಂತದ ಗಲಭೆಗಳನ್ನು ಸರಕಾರವೇ ಮುಂದೆ ನಿಂತು ಪ್ರಚೋದಿಸುತ್ತಿರುವುದು ಸ್ಪಷ್ಟವಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s