ಶಿವನ ಸಂತತಿ


 

ಈ ಸುಡುವ ಸ್ಮಶಾನಕ್ಕೆ ಬೆಂಕಿ ಇಟ್ಟವರಾರು ?

ಶಿವನ ವೇಷದ ಭಾಷೆ ಏನೂ ಹೇಳಲಾರದೆ !

ಅಂಗಾಲಿಗೆ ಅಂಟಿದ ಆವುಗೆ ಕೈಯಲ್ಲಿ ಹಿಡಿದು ನಡೆದಾಡುವ

ಹವಾಯಿ ಚಪ್ಪಲಿಯ ಮೆತ್ತನೆಯ ಹದಕ್ಕೆ

ಬೆದೆ ಬಂದಂತಾಡುವ ಈ ಮಠದ ಮಾಲಿಂಗ ತಣ್ಣಗಿರುವಾಗ ಕೇಡೆ ?

 

ಈ ಸುಡುವ ಸ್ಮಶಾನಕ್ಕೆ ಬೆಂಕಿ ಇಟ್ಟವರಾರು ?

ಶಿವನ ವೇಷದ ಭಾಷೆ ಏನೂ ಹೇಳಲಾರದೆ !

ಮುಡಿಚೆಟ್ಟು ಮಾಡಲಾರರು, ಮುಟ್ಟುತಾರೆ, ಮಾತಾಡಿಸುತ್ತಾರೆ

ಮನಸ್ಸಿನ ಮೂಲೆಯಲ್ಲಿ ಜಾತಿಯನ್ನು ಗುಣಿಸುತಾ

ಈ ಹಜಾಮನ ಮುಖ ಮುಂಜಾನೆದ್ದು ನೋಡಬಾರದೆಂದು ಗೊಣಗುತ್ತ.

 

ಈ ಸುಡುವ ಸ್ಮಶಾನಕ್ಕೆ ಬೆಂಕಿ ಇಟ್ಟವರಾರು !

ಶಿವನ ವೇಷದ ಭಾಷೆ ಏನನ್ನೂ ಹೇಳಲಾರದೆ ?

ಹಣಕ್ಕಂಟಿದ್ದ ದೆವ್ವ ಇವರಿಗಂಟಿದ್ದು ಇವರ ಖಾವಿ ಪಡದೆಗಂಟಿದ್ದು

ದಾನ ಧರ್ಮದ ನೆಪ ಹೇಳಿ ಬೇಡುತ್ತಾರೆ.

ಸುಲಿದವನಿಂದ ಸುಲಿದುಕೊಂಡು ಒಳಿತಿಗಾಗಿ ಈ ಪರದೇಶಿ ಸ್ವಾಮಿ ಮಾಡುವುದಾರೂ ಏನು ?

 

ಈ ಸುಡುವ ಸ್ಮಶಾನಕ್ಕೆ ಬೆಂಕಿ ಇಟ್ಟವರಾರು

ಶಿವನ ವೇಷದ ಭಾಷೆ ಏನು ಕಿಸಿದೀತು ?

 ಪೂರಾ ಪಂಗನಾಮದ ಹೊಲಸು ಧಂದೆ ಆಧ್ಯಾತ್ಮ.

ಪಶುಪತಿನಾಥನ ಅವತಾರ ಈಗ ನೆನಪಷ್ಟೆ.

    – ಅಮಾಸ

Advertisements

One response to “ಶಿವನ ಸಂತತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s