ಜಗತ್ತಿನ ಅಂಕೆ ಹಿಡಿದವರಾರು


        ಸಂಪೂರ್ಣವೆಂಬುದನ್ನು ಅರಕಳಿ ಮಾಡಿ, ರೇ ಸಿದ್ಧಾಂತದಲ್ಲಿ ಅವರಿವರ ಮಾತುಗಳನ್ನು ಪ್ರತಿದಿನ ಪ್ರಕಟಿಸಿ, ಸಮಾಜ, ಧರ್ಮ, ರಾಜಕಾರಣ, ಆರ್ಥಿಕ, ಜೊತಿಷ್ಯ ಹೀಗೆ ಜಾಗತಿಕಗೊಳಿಸುವ ವೈಪರಿತ್ಯಗಳನ್ನು ಮತ್ತಷ್ಟು ಅನೂಹ್ಯಗೊಳಿಸಿ, ಹಾಗಾದರೆ ಹೀಗಾಗುತ್ತೆ, ಹೀಗಾದರೆ ಹಾಗಾಗುತ್ತೆ ಎಂಬಂಥ ಮೀಮಾಂಸೆಗಳನ್ನು ವಿವರಿಸಿ.. ಯಾವದೋ ಒಂದಕ್ಕೆ ಒತ್ತಾಯಪೂರ್ವಕವಾಗಿ ಒಮ್ಮತದ ನಿಲುವುನ್ನು ಘೋಷಿಸುವಂತೆ ಪ್ರೇರೇಪಿಸುವ ಬೌದ್ಧಿಕ ಮತ್ತೆಯ ಮಾತು, ನಡವಳಿಕೆ, ಅರ್ಥ-ಅನರ್ಥಗಳ ಹೊಂಡಿಸುವ ದೇಹಭಾಷೆಯೂ, ಇವತ್ತಿನ ಮಾಧ್ಯಮಗಳಲ್ಲಿ ವಿಪರೀತ ಕಂಡುಬರುತ್ತಿವೆ. ಇದು ಯಾವ ವಿನಾಶಕ್ಕೆ ದಾರಿ ಮಾಡಿಕೊಡುತ್ತದೋ…? 

     ಆರೋಪಿ ನೀಲಿ ಚಿತ್ರ ವಿಕ್ಷಿಸುವಾಗ ಸದನದಲ್ಲಿ ಸಿಕ್ಕಿಬಿದ್ದಾಗ ಅವರನ್ನು ನಂಬಿ ವೋಟ್ ಮಾಡಿ ಕಳಿಸಿದ ಜನರ ಊರಿಗೆ ಕರೆಂಟ್ ಇರೋದಿಲ್ಲ, ಪೇಪರ್ ಹೋಗೋದಿಲ್ಲ. ಗಣಿಕಳ್ಳನು ನಡೆಸುವ ಚಾನಲ್ ಒಂದರಲ್ಲಿ ರೇಡ್ ಮಾಡಲ್ಪಟ್ಟ, ಜೈಲಿಗೆ ಅಟ್ಟಲ್ಪಟ್ಟ ಮಂತ್ರಿಯ  ಆ ಸುದ್ದಿಯ ಯಾವ ಲವಲೇಶವೂ ಪ್ರಸಾರಗೊಳ್ಳುವುದಿಲ್ಲ. ಮಾಧ್ಯಮದವರು ಜನಗಳನ್ನ ದಿಕ್ಕುತಪ್ಪಿಸುತ್ತಿದ್ದಾರೋ, ಜನಪ್ರತಿನಿಧಿಗಳು ಅದನ್ನು ಮಾಡಿಸುತ್ತಿದ್ದಾರೋ..? ವಿಚಿತ್ರವೆಂದರೆ ಶಾಸ್ತ್ರ ಹೇಳುವ ನಾಯಕರು, ಮಠಾದೀಶರು ಬದನೆಕಾಯಿ ತಿನ್ನುವ ಕಾಯಕದಲ್ಲಿ ತೊಡಗಿದಾಗ ಬೇಲಿಯ ರಕ್ಷಣೆಯನ್ನ ನಂಬುವುದು ಸಾದ್ಯವಾಗದ ಮಾತು. ಆದರೂ ಜನ ನಂಬುತ್ತಾರೆ. ಆಧುನಿಕ ಬಸವಣ್ಣ ಎಂದೆಲ್ಲ ಹೊಗಳಿಸಿಕೊಂಡ ಮಂತ್ರಿಯೊಬ್ಬ ದೇವಸ್ಥಾನಗಳಿಗೆ ಹೋಗುವುದು ವಾಮಾಚಾರದಲ್ಲಿ ತೊಡಗಿರುವುದು ಕಂಡೂ ಬಸವಣ್ಣನ ಅನುಯಾಯಿಗಳಾದ ವೀರಶೈವರು ಅವರನ್ನು ಬೆಂಬಲಿಸುತ್ತಾರೆ. ದೇಶ ಕಟ್ಟುವ ಮಾತಾಡಿ, ಪ್ರಾಣವನ್ನು ಒತ್ತೆ ಇಡಲು ಬಯಸುವ ಆಕ್ರೋಶಭರಿತ ದೇಶಭಕ್ತರು ರಾಷ್ಟ್ರ ಕಲ್ಪನೆಯಲ್ಲಿ ಹಿಂದುತ್ವವನ್ನು ಸೇರಿಸುತ್ತಾರೆ, ಬೆತ್ತಲೆಯಾಗದ ಗೋಸುಂಬೆ ಜಗತ್ತು ಈ ಇಂಥ ಪ್ರವೃತ್ತಿಯನ್ನು ಬೆಳೆಸಿಕೊಂಡಿರಬಲ್ಲದು.

        ಹೀಗೆ ಸುದ್ಧಿಯಾಗುವ ಅವರಿಗೂ ಹೆಂಡತಿ ಮಕ್ಕಳಿರುತ್ತಾರೆ, ಮನೆ-ಮಠಗಳ ಸಂಪರ್ಕ ಇರುತ್ತೆ, ಹಸಿವು ನಿದ್ರೆ ನೀರಡಿಕೆಯ ಅನುಭವ ಇರುತ್ತದಷ್ಟೆ. ಆದರೆ ನಿರಂತರವಾಗಿ ಅವರೊಳಗೆ ಆಳಬೇಕೆಂಬ ಅಧಿಕಾರದ ದಾಹ, ನಾನು ಎಂಬ ಮದ, ನನ್ನದು ಎನ್ನುವ ರೋಗಗ್ರಸ್ಥ ಪ್ರೀತಿ, ಅಭಿಮಾನಗಳ ಉತ್ಕಟತೆ ಅವರ ಮನುಷ್ಯತ್ವವನ್ನು ಸಾಯಿಸಿಬಿಟ್ಟಿರುತ್ತದೆ. ಈ ಯಂತ್ರಯುಗದಲ್ಲಂತೂ ಐಟಿ-ಬಿಟಿ ಮಂತ್ರ ನಿತ್ಯ ನೂತನವಾಗುತ್ತಿರುವಾಗ ಕುಸುರಿ ಕೆಲಸ ಕಸಬು ಕಾಯಕಗಳು ಹಳ್ಳ ಹಿಡಿದಿವೆ. ಜನರ ಬದುಕಿನ ಅಭಿರುಚಿ ಬದಲಿಸುವ ಪ್ರಯತ್ನಗಳನ್ನು ಈ ಆಳುವ ವರ್ಗ ತಮ್ಮ ಪ್ರತಿಷ್ಠೆಗೆ ಅನುಗುಣವಾಗಿ ಹೊಂದಿಸಿಕೊಳ್ಳುತ್ತಿರುತ್ತದೆ. ಒಂದು ಕಾಲದಲ್ಲಿ ಜಮೀನ್ದಾರರು ಸೃಷ್ಠಿಸಿದ- ಪಂಚಮರ ಸಾಂಸ್ಕ್ರತಿಕತೆಯಲ್ಲಿ ಉಳ್ಳವರನ್ನು ನಿಂದಿಸುವ, ದೇವರನ್ನು ಬೈದುಕೊಳ್ಳುವ- ಹಬ್ಬಗಳ ರಿತಿಯಲ್ಲಿ ಈಗ ಮಾಧ್ಯಮಗಳ ರೂಪದಲ್ಲಿ ತಂತ್ರಜ್ಞಾನ ಎನ್ನುವುದು ಹುಟ್ಟು ಹಾಕಿರುವ ಹೊಸ ತೆರನಾದ ಆಳ್ವಿಕೆ ಮಂತ್ರವಾಗಿದೆ ಅನ್ನಿಸುತ್ತಿದೆ.

 

                                                                   -ಅಮಾಸ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s